ಸಮಯ ಬೆಳಿಗ್ಗೆ ೮.೩೦ ಮೆಕ್ಕ ಕಾಲಮಾನ (ಭಾರತೀಯ ಕಾಲಮಾನ ೧೧.೦೦): ಡಿಪ್ಲೊಮ್ಯಾಟಿಕ್ ಏರಿಯಾ:
ಸಮಯ ಬೆಳಿಗ್ಗೆ ೯.೩೦ ಮೆಕ್ಕ ಕಾಲಮಾನ (ಭಾರತೀಯ ಕಾಲಮಾನ ೧೨.೦೦): ಸೀಫ್ ಏರಿಯ
ನೆಮ್ಮದಿಯಿಂದ ಭಾರತೀಯ ಪತ್ರಿಕೆಗಳನ್ನ ಓದುತ್ತಾ, ಕಾಫಿ ಕುಡಿತಿದಿನಿ. ಯಾಕೋ ಕತ್ಲು ಆಗ್ತಿದೆ ಹೊರಗೆ!! ಮನೆಗೆ ಹೊರ್ಡೋ ಸಮಯ ಆಗ್ಬಿಡ್ತಾ ಇಷ್ಟ್ ಬೇಗ!!! ಹೊರಗೆ ಸಕ್ಕತ್ ಕತ್ಲು?? ಎನಾಗ್ತಿದೆ? ಅಷ್ಟ್ರಲ್ಲಿ ಜೋರಾ..ದ ಶ್ಬ್ಧ….. ಫಳಾರ್……..ಏನಾಯ್ತು?? ಏನದು???? ಹೊರಗೆ ಬಂದು ನೋಡಿದ್ರೆ ನಮ್ಮ ಕಟ್ಟಡದ ಕೊನೇ ಮಹಡಿಯ ಗಾಜು ಕೆಳಕ್ಕೆ ಬಿತ್ತು… ರಭಸದಿಂದ ಗಾಳಿ ಬೀಸ್ತಿದೆ!! ಜೊತೆಗೆ ಧೂಳೂ!! ಎನೂ ಕಾಣಿಸ್ತಿಲ್ಲ.. ನೀಚಡಿಯಲ್ಲಿ ಜುಲೈ ತಿಂಗಳ ಮಳೆಯಂತೆ ಧೂಳು ಸುರಿತಿದೆ. ರಸ್ತೆಲಿ ಓಡಾಡೊ ಕಾರುಗಳೆ ಸಂಖ್ಯೆ ಕಮ್ಮಿ ಆಗಿದೆ, ಪಕ್ಕದ ಕಟ್ಟಡ ಕಟ್ಟುವ ಏಶಿಯಾದ ಕಾರ್ಮಿಕರು ಮಾತ್ರ ಕೆಲಸ ಮಾಡ್ತನೇ ಇದಾರೆ. ಅವರಿಗೆ ಒಳಗೆ ಬೆಚ್ಚಗೆ ಕೂಡಲು ಅವಕಾಶ ಇಲ್ಲ, ಬಿಡೋದು ಇಲ್ಲ..
ಪಕ್ಕದಲ್ಲಿರೊ ಫೊಟೊಗಳು ಲಕ್ಷ್ಮಿ ನಮ್ಮ ಮನೆಯ ಮೇಲಿನಿಂದ ತೆಗ್ದಿರೋದು
0 comments:
ಕಾಮೆಂಟ್ ಪೋಸ್ಟ್ ಮಾಡಿ