7/02/2008 12:35:00 PM

ಧೂಳ್ ಮಗ ಧೂಳ್


ಅಬ್ಬ ಈ ದೇಶದಲ್ಲಿ ವಾರದಲ್ಲಿ ಒಂದ್ಸಲ ಧೂಳು ಸುರಿಯೊಕೆ ಶುರು ಅದ್ರೆ ಮತ್ತೊಂದು ವಾರದವರೆಗು ಸುರಿತಾನೆ ಇರತ್ತೆ. ಇದನ್ನ ಯಾಕೆ Sand Storm ಅಂತ ಹೇಳ್ತಾರೆ ಅಂತ ಗೊತ್ತಿಲ್ಲ ಆದ್ರೆ ಭಯಂಕರ ಧೂಳಂತು ಬರತ್ತೆ, ಗಾಳಿನೇ ಬೀಸಲ್ಲ.

ನನ್ ಮನೆಲಿ ಮೊದ್ಲು AC ಇರ್ಲಿಲ್ಲ. ಅದ್ರೆ ಅದಕ್ಕೆ ಅಂತ 2 ಕಿಂಡಿ ಬಿಟ್ಟಿದ್ರು, ಅದ್ರಿಂದ ಪ್ರತಿದಿನ ಸಿಕ್ಕಾಪಟ್ಟೆ ಧೂಳು ಬರ್ತಿತ್ತು. ಪುಣ್ಯಕ್ಕೆ ಬೇಗನೆ ತೊಗೊಂಡೆ ACನ, ಇಲ್ಲ ಅಂದಿದ್ರೆ ನನ್ಗೆ ಪ್ರತಿ ದಿನ ಮನೆ ಗುಡ್ಸಿ ಗುಡ್ಸಿ ಸುಸ್ತಾಗಿರ್ತಿತ್ತು. ಇವಾಗ್ಲು ಮನೆ ಒಳಗೆ ಧೂಳು ಬರತ್ತೆ, ಆದ್ರೆ ಮೊದಲಿನಷ್ತಲ್ಲ.

ನಮ್ಮ ಕಂಪನಿ ಜನ ಅವ್ರು ಕೊಟ್ಟ ಮಾತನ್ನ ಉಳಿಸಿಕೊಂಡರು. ನನಗೆ ಒಂದಿಷ್ತು ಧನಸಹಾಯ ಮಾಡಿದರು ಕೂಡ. ಅದ್ರಲ್ಲೆ ಎಲ್ಲ ಸಾಮಾನು ಮನೆಗೆ ತೊಗೊಂಡೆ. ಇನ್ನು ಅದನ್ನ ಉಪಯೊಗ ಮಾಡೊಕೆ ನನ್ನ ಹೆಂಡತಿ ಬರ್ಬೆಕು ಅಷ್ಟೆ.

ಒಹ್ ಮರ್ತಿದ್ದೆ, ನಾನು ಇವಾಗ ಮನೆಲೆ ಅಡುಗೆ ಮಾಡ್ಕೊಳ್ತಿದ್ದೆನೆ. ಆ ದರಿದ್ರ ಬ್ರೆಡ್ಡು ಜಾಮು ತಿಂದು ನಾಲಿಗೆ ಮರಗಟ್ಟಿತ್ತು. ಮೊನ್ನೆ ಅಡುಗೆ ಮನೆಗೆ ಎಲ್ಲ ತಂದಾಗ ಮೊದಲನೆಬಾರಿಗೆ ಬಿಸಿಬೇಳೆಬಾತ್ ಮಾಡಿದ್ದೆ. ಅಲ್ಲಿಗೆ ಎಲ್ಲ ಸರಿಹೊಯ್ತು. ಇವಾಗ ಮನೆಲೆ ಉಪ್ಪಿಟ್ಟು, ಅವಲಕ್ಕಿ ಮಾಡ್ಕೊಳ್ತಿದಿನಿ.

ಮನೆಲಿ ಒಂದು ಸಣ್ಣ ದೂರದರ್ಶನ ಇದೆ, ಅದ್ರಲ್ಲಿ ಸದ್ಯಕ್ಕೆ Z film Arabia ಮತ್ತೆ NDTV Arabia ನೋಡ್ತಿದಿನಿ. ಅದೆನೆ ನನ್ನ ಮನೋರಂಜನೆ ಇಲ್ಲಿ. ಇದ್ ಬಿಟ್ರೆ ಕನ್ನಡ ವಾರಪತ್ರಿಕೆಗಳು ಸಿಗುತ್ವೆ. ಅದ್ರೆ ಅಲ್ಲಿಗಿಂತ ಮೂರುಪಟ್ಟು ಜಾಸ್ತಿ ರೇಟ್ ಅಷ್ಟೆ.

ಇಲ್ಲಿ ಕನ್ನಡದೋರ ಹೊಟೆಲ್ ಇವೆ. ಭಾಳ ಚನ್ನಾಗಿ ಅಲ್ದೆ ಇದ್ರು, ಸುಮಾರಿಗೆ ಪರ್ವಾಗಿಲ್ಲ ಅನ್ನೋಷ್ಟ್ರಮಟ್ಟಿಗೆ ಸಸ್ಯಾಹಾರಿ ತಿಂಡಿಗಳು ಸಿಗುತ್ವೆ.