ಅಂತೂ ಇಂತೂ ಸಿಕ್ಕಾಪಟ್ಟೆ ಗುದ್ದಾಡಿ ಬಹರೇನ್ ತಲ್ಪಿದೆ. ತಣ್ಣಗಿರೋ ಬೆಂಗಳೂರಿಂದ ಇಲ್ಲಿ ಬಂದ್ರೆ ಈ ದೇಶ ಬಿಸಿ ಬಾಣಲೆ ತರ ಇತ್ತು. ನಮ್ಮ ಕಂಪನೀ ಬುಕ್ ಮಾಡಿದ ಹೊಟೆಲ್ಗೆ ಹೋದಾಗ ಸ್ವಲ್ಪ ತಣ್ಣನೆಯ ಅನುಭವ ಆಯಿತು. ನಾನು ಹೋಗಿದ್ದು ಶುಕ್ರವಾರವಾದ್ದರಿಂದ ಆ ದಿನ ಎಲ್ಲಾಕಡೆ ಸ್ವಲ್ಪ ರಶ್ ಇತ್ತು.
ಊಟ ಮಾಡದೇ ಹಾಗೆ ಕುಳಿತಿದ್ದಾಗ ನಿದ್ದೆ ಬಂದಿದ್ದು ಗೊತ್ತಾಗ್ಲೇ ಇಲ್ಲ. ನಮ್ಮ ಕಂಪನಿಯ ಮ್ಯಾನೇಜರ್ ಒಬ್ಬ ನನಗಾಗಿ ಬಹಳ ಹೊತ್ತು ಕಾಡು ಕುಳಿತಿದ್ದು, ನಾನು ಸಿಗದೆ, ಮ ಒಂದು ಸಿಮ್ ಕಾರ್ಡ್ ಬಿಟ್ಟು ಹೋಗಿದ್ದ. ಆ ನಂತರ ಫೋನ್ ಮಾಡಿದಾಗ ಮತ್ತೆ ಬಂದು ಒಂದಿಷ್ಟು ದುಡ್ಡನ್ನು ಕೊಟ್ಟ ಸದ್ಯದ ಕರ್ಚಿಗೆ ಎಂದು.
ಶನಿವಾರ ಪೂರ್ತಿ ರೆಸ್ಟ್ ತೊಗೊಂಡು ಭಾನುವಾರ ಬೆಳಿಗ್ಗೆ ನಮ್ಮ ಆಫೀಸ್ ಹೋದೆ. ಸ್ವಲ್ಪ ಸಣ್ಣ ಕಂಪನಿ ಅದ್ರುನು ಭಾಳ ದೊಡ್ಡ ಜಾಗದಲ್ಲಿ ಆಫೀಸ್ ಮಾಡಿದ್ದಾರೆ. ಭಾನುವಾರದಿಂದ ಗುರುವಾರ ಆಫೀಸ್ ಅಷ್ಟೇ, ಶುಕ್ರವಾರ ನಮಜೂ, ಆದಾದ್ಮೆಲೆ ಬಾರು ಅಷ್ಟೇ ಇಲ್ಲಿ ಜನ ಮಾಡೋದು. :)
ಕುತ್ಕೊಳೊಕೆ ಒಂದು ದೊಡ್ಡ ಕ್ಯಾಬಿನ್ ಕೊಟ್ಟಿದ್ದಾರೆ, ಕೂತಲ್ಲಿಂದನೆ ಹೊರಗೆ ನೋಡಿದ್ರೆ ಬರೀ ಸ್ಯಾಂಡ್ ಮತ್ತೆ ಸೀ ಕಾನ್ಸತ್ತೆ ಅಷ್ಟೇ. ಟ್ರೀ ಅಂದ್ರೆ ಪಾಮ್ ಟ್ರೀ ಅಷ್ಟೇ ಇರೋದು ಇಲ್ಲಿ, ಅದ್ಬೀಟ್ರೆ ಬರೀ ಹೊಸ ಹೊಸ ಬಿಲ್ಡಿಂಗ್ಸ್.
ನಮ್ಮ ಆಫೀಸ್ ಜನದಲ್ಲಿ ಅರ್ಧದಷ್ಟ್ ಮಂದಿಗೆ ಇಂಗ್ಲೀಶ್ ಬರಲ್ಲ, ಅಕಸ್ಮಾತ್ ಬಂದ್ರೆ ನಮ್ಮ ಮಂಜ ಮಾತಾಡ್ತನಲ ಅಷ್ಟೇ ಚನಾಗಿ ಮಾತಾಡ್ತಾರೆ :) ನಮ್ಮ ಆಫೀಸ್ ಹತ್ರಾನೇ ದೊಡ್ಡ ದೊಡ್ಡ ಮಾಲ್ ಇವೆ. ಆದ್ರೆ ಹೋಗಿ ಬರೋದು ಕಷ್ಟ ಅಷ್ಟೇ.
ಇಡೀ ದೇಶನ ಅರ್ಧ ದಿನದಲ್ಲೇ ಸುತ್ತಿ ಮುಗ್ಸ್ಬೊದು, ಆದ್ರೆ ಕಾರ್ ಬೇಕು ಅಷ್ಟೇ. ;) ಇಲ್ಲಿ ಭಯಾನಕ, ಸಿಕ್ಕಾಪಟ್ಟೆ ಬಿಸ್ಲು, ಮುಂದಿನ ತಿಂಗ್ಲಿಂದ ಬೇಸಿಗೆ ಶುರು ಅಂತೆ, ಇವಾಗೇ ಬೆಳಿಗ್ಗೆ 7 ಗಂಟೆಗೆ ಸೂರ್ಯ ನೆತ್ತಿ ಮೇಲೆ ಬಂದಿರ್ತಾನೆ, ಇನ್ನು ಮುಂದೆ ಎನ್ ಕಥೆನೋ ಏನೋ? :(
ಈ ದೇಶದಲ್ಲಿ ಊಟ ತಿಂಡಿ ಮಾತ್ರ ಮರ್ತ್ರೆ ಭಾಳ ಒಳ್ಳೇದು. ಎಷ್ಟ್ ಬೇಕಾದ್ರೂ ಬ್ರೆಡ್ ಮತ್ತೆ ತರಹೇವಾರಿ ಜಾಮ್ ಸಿಗತ್ತೆ, ಅಷ್ಟೇ ತರದ್ದು ಫ್ರೂಟ್ಸ್ ಸಿಗತ್ತೆ. ಅನ್ನ ಕಾಣದೇ ಭಾಳನೆ ದಿನ ಆದಂಗೆ ಅನ್ಸಿತ್ತು ನಂಗೆ. ಇಲ್ಲೆಲ್ಲೋ ಸಿಗತ್ತನ್ತೆ ಎಲ್ಲಿ ಅಂತ ಹುಡೂಕ್ಕೊಳ್ಬೇಕು, ಊರಿನ್ ತುಂಬಾ ಮಲಯಾಳೀಗಳಿದಾರೆ, ಮತ್ತೆ ಆವ್ರೇ ಊರಿಡೀ ಅಂಗಡಿ ಇಟ್ಟಿದಾರೆ, ಮುನ್ಡೆವು ಎಲ್ ಹೋದ್ರೂ ಸಿಗುತ್ವೇ.
ನಂಗೆ ಓಬ್ಬೀ ಒಬ್ಬ ಕನ್ನಡ ಮಾತಾಡೋನು ಸಿಕ್ಕಿದನೆ, ಅವ್ನಿಗು ನೆಟ್ಟಗೆ ಬರಲ್ಲ ಕನ್ನಡ ಮಾತಾಡೋಕೆ (ಪಾಪ ಮುಂಬೈ ಒಳಗೆ ಓದಿದ್ದಂತೆ, ಅದ್ಕೆ ಇರ್ಬೇಕು) ಏನೋ ಒಟ್ನಲ್ ಒಂದು ಕನ್ನಡ ಅಂತ ಮಾತಾಡ್ತನೇ ಅಷ್ಟೇ. ಕನ್ನಡಾದೋರ ಹೊಟೆಲ್ ಕೂಡ ಇದ್ಯಂತೆ, ಆದ್ರೆ ಅದೆಲ್ಲಿ ಅಂತ ಆ ಪುಣ್ಯಾತ್ಮಂಗೂ ಗೊತ್ತಿಲ್ಲ.
ನಾನು ಇವಾಗ ಸಧ್ಯ ಒಂದು ಸರ್ವಿಸ್ ಆಪಾರ್ಟ್ಮೆಂಟಲ್ ಉಲ್ಕೊಂಡಿದಿನಿ. ಮನೆ ಹುಡೂಕ್ಕೊಳ್ಬೇಕಂತೆ. ಇಲ್ಲಿ ಸಿಕ್ಕಪಟ್ಟೆ ಜಾಸ್ತಿ ಹೇಳತಾರೆ ರೆಂಟ್. ಏನೋ ನಂ ಅದೃಷ್ಟಕ್ಕೆ ನಂ ಕಂಪನ್ಯೋರೇನೇ ಒಂದಿಷ್ಟು ದುಡ್ಡ್ ಕೊಡ್ತಾರಂತೆ ಮನೆಗೆ ಅಂತ. ಕಾರ್ ಕೂಡ ತೊಗೋಳ್ಳೆಬೇಕಂತೆ, ಇಲ್ಲಾಂದ್ರೆ ಆಲ್ಮೋಸ್ಟ್ ಅರ್ಧಸಂಬಳ ಟ್ಯಾಕ್ಸಿಗೆ ಕರ್ಚಾಗತ್ತೆ.
ಇವಾಗ ಸಧ್ಯಕ್ಕೆ ನಂಗೊಬ್ಬ ಮಹಾನ್ಸೋಂಬೇರಿ ಬಹರೈನಿ ಡ್ರೈವರ್ನ ಕೊಟ್ಟಿದರೆ, ಅವ್ನು ಆಫೀಸ್ಗೆ ಕರ್ಕೊಂಡ್ಬರ್ತೀನಿ ಅಂತ ಕೇವಲ ಒಂದ್ ಗಂಟೆ ಲೇಟ್ ಮಾಡಿ 9.30ಗೆ ಕರ್ಕೊಂಡು ಬರ್ತಾನೆ. ದಾರಿಪೂರ್ತಿ ಅದೇನೋ ಕಥೆ ಹೇಳ್ತಾನೇ ನಂಗಂತೂ, ಇವತ್ತಿನ್ ವರೆಗೂ ಅರ್ಥ ಆಗಿಲ್ಲ. ಓ... ಮರ್ತಿದ್ದೆ ಈ ಪುಣ್ಯಾತ್ಮನೆ ನನ್ನ ಏರ್ಪೋರ್ಟಲ್ಲಿ ರಿಸೀವ್ ಮಾಡ್ಕೊಂದಿದ್ದು. ಅಲ್ಲಿ ಅವ್ನನ್ನ ಹುಡುಕೋಕೆ ಕೇವಲ ಒಂದ್ ಗಂಟೆ ಬೇಕಾಗಿತ್ತು, ಅಕಸ್ಮಾತ್ ಇನ್ನೊಂದ್ ಹತ್ ನಿಮಿಷಕ್ಕೆ ಸಿಗದೆ ಹೋಗಿದ್ದಿದ್ರೆ ನಾನ್ ನೆಕ್ಸ್ಟ್ ಫ್ಲೈಟ್ಗೆ ವಾಪಸ್ಬರ್ಬೇಕಾಗಿತ್ತು.
ಈ ಊರಲ್ಲಿ ಅರ್ಧ ಗಂಟೆಗಿಂತ ಜಾಸ್ತಿ ಜರ್ನೀ ಮಾಡಿದ್ರೆ ದೇಶ ಮುಗ್ಧೋಗತ್ತೆ ಇಲ್ಲಾಂದ್ರೆ ಪಕ್ಕದ್ದೇಶದಲ್ಲಿ ಇರ್ತಿವಿ ಅಷ್ಟೇ :) ಜಯನಗರ್ ಅತ್ವ ಸಾರಕ್ಕಿ ಅಷ್ಟೂ ಇಲ್ದೇ ಇರೋ ಜಾಗಗಳು ಎಲ್ಲ ಒಂದೊಂದು ಊರಂತೆ. ಒಂದು ರೋಡ್ ಜಾಸ್ತಿ ಹೋದ್ರೆ ಬೇರೆ ಊರಲ್ಲಿರ್ತಿವಿ.
ಸುಧಿ ಫ್ರೆಂಡ್ ಒಬ್ಬ ಈ ಗುರುವಾರ ವೀಕೆಂಡ್ ಮಾಡಸ್ತೀನಿ ಅಂದಿದನೆ ನೋಡ್ಬೇಕು, ವೀಕೆಂಡ್ ಮಾಡಿಸ್ತಾನೇ ಅಂತ :)
ಸಧ್ಯಕ್ಕೆ ಇಷ್ಟ್ ಸಾಕು
ಮತ್ತೆ ಸಿಗಣ :)
A blog for my thoughts which are not fully thought though.
ಹಳೆ ಕಥೆ
ಇದನ್ನೂ ಓದಿ
6/03/2008 05:40:00 PM
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)