12/04/2008 01:08:00 ಅಪರಾಹ್ನ

ಕಂಪ್ಲಿಮೀಟರ್ನಾಗೆ ಅಡಿಕೆ ಮಾರ್ಕ್ಯಂತಾರಂತೆ ಇನ್ಮ್ಯಾಕೆ…

ಓದಿದ್ರಾ ವಿಸಾರಾವಾ?? ಪ್ಯಾಪರ್ನಾಗ್ ಬಂದಿತ್ತು ಇವತ್ತು. ಸಿಮೊಗಾದಾಗೆ ಹೊಸಾ ಮಂಡಿ ಮಾಡ್ಯಾರಂತೆ! ನಮ್ಮೋವು ಅಡಿಕೆಯಾ ಕಾಂಪ್ಲಿಮೀಟರ್ನಾಗೆ (Computer) ಮಾರ್ಕ್ಯಬೈದಂತೆ, ದಲ್ಲಾಳಿಯೆ ಇಲ್ಲಂತೆ, ಇಂಟ್ರುನೆಟ್ಟು ಸಾಕಂತೆ. ಹೆಂಗೈತೆ ಸುದ್ದಿ??

ಮೊನ್ನೆಗಂಟಾ ನಮ್ಮ್ ರಾಮಿ ಹೇಳ್ತುದ್ಲು, ಅಡಿಕೆಗೆ ರೇಟ್ ಬರಾದಿಲ್ಲ, ಮಾರ್ಕೆಟ್ನಾಗೆ ತಗಣಾದಿಲ್ಲ ಅಂತವಾ. ಇವಗಾ ಎಲ್ಲಾದಕ್ಕು ಕಂಪ್ಲಿಮೀಟರ್ ಬಂದೈತೆ, ನಮ್ಗು ವಸಿ ಒಳ್ಳೆದಾಕತಿ.. ಹೆಂಗ್ ನಡಿತೈತಂತೆ ಗೊತ್ತಾ ಕಂಪ್ಲಿಮೀಟರ್ ಮಂಡಿ, ನಮ್ ಅಯ್ನೋರ್ ತಾವ ಐತಲ ಕಂಪ್ಲಿಮೀಟರ್ ಅದ್ರಗೇ ರೇಟ್ ಬರಿಬೇಕಂತೆ, ಅದನ್ನಾ ಮಂಡಿಗ್ ಬರೊ ಗಿರಾಕಿಗಳು ನೋಡ್ಕ್ಯಂಡು, ಅವ್ರ್ ರೇಟ್ ಹಚ್ತಾರಂತಮ್ಮಿ. ಅಮ್ಯಾಕೆ ಯವಾರ ಕುದ್ರಿದ್ರೆ ನಮ್ದು ಅಡಿಕೆ ಮಂಡಿಕೆ ಕಳ್ಸ್ತುವು. ಅವ್ರು ಅಯ್ನೋರಿಗೆ ದುಡ್ಡು ತಂದ್ ಕೊಡ್ತಾರಂತೆ. ಹಿಂಗೆ ಇದ್ರೆ ಅದೇನ್ ಅರಾಮಾಕತೋ ಎನೋ. ಇಸ್ಟ್ ವರ್ಸಾ ಬ್ಯಾಸಾಯಾ ಮಾಡಾಕ್ ಮುಂಚೆ ಮಂಡಿಲಿ ಸಾಲ ಇಸ್ಕ್ಯಂತುದ್ವಾ, ಕಡಿಕೆ ಅಡಿಕೆ ಮಾರಿ ಸಾಲ ತೀರ್ಸ್ತುದ್ವು. ಇನ್ಮ್ಯಾಕೆ ಹೆಂಗ್ ಆಕತೋ ಎನೊ. ಮಂಡಿಲಿ ಅಡಿಕೆ ಹಾಕಿದ್ರು ಸಾಲ ಕೊಡ್ತುದ್ರು…

ಅಲ್ಲಾ ಈ ಕಂಪ್ಲಿಮೀಟರ್ನಾಗೆ ಅಂತದ್ ಏನೈತಿ ಅಂತ??? ಎಲ್ಲಾದಕ್ಕು ಕಂಪ್ಲಿಮೀಟರ್ ಬೇಕೇ ಬೇಕು ಅಂತಾರಲ.. ಹಿಂಗೆ ಆಗ್ತಿದ್ರೆ ಕಲ್ಟಿನೇಗ್ಲು (Cultivator) ಬದ್ಲು ಕಂಪ್ಲಿಮೀಟರ್ ತಂದ್ರು ತರ್ಬೈದು ಮುಂದಿನ್ ಗದ್ದೆ ಬ್ಯಾಸಾಯಕ್ಕೆ. ಇವಾಗ ಗದ್ದೆ ಅಕ್ಕುಪತ್ರ, ಪಾಣಿ ಎಲ್ಲ ಕಂಪ್ಲಿಮೀಟರ್ನಾಗೇ ಕೊಡ್ತಾರೆ. ಮುಂದೆ ಗದ್ದೆನುವ ಕಂಪ್ಲಿಮೀಟರ್ನಾಗೆ ತೋರ್ಸ್ತಾರೋ ಎನೊ. ಕಂಪ್ಲಿಮೀಟರ್ನಾಗೆ ಬ್ಯಾಸಾಯಾ ಮಾಡ್ಕ್ಯಂಡು ಬದುಕ್ಬೇಕಾಗ್ತತಿ ಮುಂದೆ.

ಇವಾಗಾಗ್ಲೆ ಟ್ಯಾಟ್ರಿ (tractor), ಕಲ್ಟಿನೇಗ್ಲು ಬಂದೆನೆಯ ನಮ್ ದೀವ್ನಾಯಕ್ರು ಹುಡುಗ್ರು ಗದ್ದಿಗೆ ಹೊಗಾದಿಲ್ಲ. ಮಳಿ ಬಿದ್ಮ್ಯಾಗೆ ಒಂದ್ಕಿತ ಹನುಮಂತಿ ಟ್ಯಾಟ್ರಿಲೋ, ಅಂಗಡಿ ಸಿದ್ದಪ್ಪನ್ ಟ್ಯಾಟ್ರಿಲೊ ಕಲ್ಟಿನೇಗ್ಲು ಹೊಡ್ಸಿ ಭತ್ತ ಹಾಕ್ತಾರೆ. ನೆಕ್ಸ್ಟು ಕಂಪ್ಲಿಮೀಟರ್ನಾಗೆ ಭತ್ತ ಬಿತ್ತೋ ಹಂಗೆ ಆಗ್ಬಿಟ್ರೆ ನಮ್ ಹುಡ್ರು ಹನುಮಂತಿ ಅಂಗಡಿ ಮುಂದೆ ಕುನ್ತಂತಾರೆ ಶೆಕೆಂಡ್ಶು ಹೆಂಡ ಸಾರಾಯಿ ಕುಡ್ಕಂಡು.

ಆಗಿರೊದು ಇಷ್ಟೆ: ನವೆಂಬರ್ 28ರಂದು National Spot Exchange Limited (NSEL) ಶಿವಮೊಗ್ಗಾದಲ್ಲಿ ತನ್ನ ಮೊದಲ Internet-based ಅಡಿಕೆ ಮಾರಾಟ ಕೇಂದ್ರ ಉದ್ಘಾಟನೆ ಮಾಡಿದೆ. ಸಧ್ಯಕ್ಕೆ ಕೆಂಪಡಿಕೆ ವ್ಯವಹಾರ ಮಾತ್ರ ನಡೆಯುತ್ತದೆ. ಮುಂದೆ ಚಾಲಿ, ಮೆಕ್ಕೆ ಜೋಳ ಎಲ್ಲಾದನ್ನು ಇದ್ರಲ್ಲೆ ಮಾರೋ ವ್ಯವಸ್ತೆ ಮಾಡುತ್ತಾರಂತೆ. ಇದ್ರಿಂದ ಅಡಿಕೆ ಬೆಳೆಗಾರರಿಗೆ ಏನ್ ಏನ್ ಉಪಯೋಗ ಅಗತ್ತೆ ಅನ್ನೊದು ಇನ್ನೂ ಸರಿಯಾಗಿ ತಿಳಿದು ಬಂದಿಲ್ಲ. (ಉಪಯೋಗ ಅಂದ್ರೆ ಗೊತ್ತಲ, ಮೊದ್ಲೆ ಸಾಲ ಸಿಗತ್ತೊ ಇಲ್ವೊ ಅನ್ನೊದು ಅಷ್ಟೆ).

The National Spot Exchange Ltd (NSEL), India's first online spot trading platform, promoted by Financial Technologies India Limited (FTIL), Multi Commodity Exchange (MSE) and National Agricultural Co-operative Marketing Federation of India (NAFED).

In the initial stage, the exchange is planning to launch arecanut, black pepper, castor seed, coriander, cumin seed, cotton (long and medium) gold, rubber, silver, tur and urad for trading. In the next phase, the exchange may start spot trading in other commodities like industrial metals, fertilizers and pesticides.

As of now, agri-commodities will be launched with production areas as delivery centers of Gujarat, Maharashtra, Karnataka, Kerala, and Bihar. Physical delivery will be on the basis of T+1 and T+3.

ಸ್ನೆಹಸೇತು: ವಿಜಯ ಕರ್ನಾಟಕ ಮತ್ತು Financial Express